ತತ್ವ ವಿಚಾರವ ಮಾಡೋ/tatva vicharava madoo.

ತತ್ವ ವಿಚಾರವ ಮಾಡೋ!

ತತ್ವ ವಿಚಾರವ ಮಾಡೋ!
ಪರಮಾತ್ಮನ ಲೀಲೆಯೋಳಾಡೋ!
ತತ್ವವ ತಳಿಯದೆ ಆತ್ಮನೆ ಕಾಣದೆ!
ಕತ್ತೆಯಂತೆ ಮತ್ತೆ ವದರಲೂ ಬೇಡೋ!! ಪ!!

ಏಳು ನೆಲೆಯನೇರಿ ನೋಡೋ!
ಸಮ್ಮೇಳದಿ ಭಜನೆಯೋಳೋಡೋ!
ಕೋಳಿತನದಿ ಕಾಳುಕಡಿಯತಿಂದು!
ಕೋಳಿಯಂತೆ ಮತ್ತೇ ಕೂಗಲು ಬೇಡೋ!! ಪ!!

ಜ್ಞಾನ  ಮಾನ್ಯಾರೋಳು ಕೊಡೋ!
ಅಜ್ಞಾನಕ್ಕೆ ಬೀಳಲು ಬೇಡೋ!
ಜ್ಞಾನ  ಪ್ರಕಾಶವ ತಾನೊಂದರಿಯದೆ!
ಶ್ವಾನನಂತೆ ಮತ್ತೆ ಬೊಗಳಲು ಬೇಡೋ!

ಪೊಡವಿಯೋಳಗೆ ಎಮ್ಮೆಡಗಿ!
ಪ್ರಭುದೇವರೇಳಿದ ನಡೆನುಡಿದೆ!
ಕಡುದೃಡದಿಂದಲಿ ಅಡಿಗಳಿಗೆರಗುವೆ!
ಹುಡುಗಾಟದ ಬುದ್ಧಿ ನಿನಗೇಕೋ ಮರುಳೇ! 

Comments

Popular posts from this blog

ಎಷ್ಟು ದಿನ ಇಲ್ಲೆ ಇರತಿ/estu dhina elle eruthu

ಸೋರುತಿಹುದು ಮನೆಯ ಮಾಳಿಗಿ/soruthihudu maniya maligi