ಎಷ್ಟು ದಿನ ಇಲ್ಲೆ ಇರತಿ/estu dhina elle eruthu

ಎಷ್ಟು ದಿನ ಇಲ್ಲೆ ಇರತಿ! 


ಎಷ್ಟು ದಿನ ಇಲ್ಲೆ ಇರತಿ!
ನಿನ್ನ ಮನ ಬ್ಯಾರೇತಿ! 2!

ಬಣ್ಣದ ಮನೆಯ ಕಟ್ಟಿಸಿದಿ ಜೋರ!
ಸ್ಥಿರವಾಗಿ ನಿನುಇರಲಿಲ್ಲ ಪೂರ! 2!
ಹೆಂಡರು ಮಕ್ಕಳಿಗೆ ನನ್ನವರು ಅಂದಪ್ಪ!2!
ನೀನು ಹೋಗುವಾಗ ಯಾರು ಇಲ್ಲಪ್ಪ!

ಹೊಂಚು ಹಾಕಿ ನೀನು ಲಂಚವ ತಿಂತಿ!
ಲಾಭಕ್ಕಾಗಿ ನೀನು ಲಡಾಯಿ ಮಾಡುತಿ! 2!
ಅಣ್ಣ ತಮ್ಮರಗೆ ಮೋಸ ಮಾಡುತಿ! 2!
ನೀ ಸತ್ತ ಮೇಲೆ ಯಾರ ಹೆಗಲ ಮೇಲೆ ಹೋಗುತಿ!

ಭಿಕ್ಷುಕ ಬಂದರೆ ದಾನ ಇಲ್ಲಂತೆ!
ಊರ ತುಂಬ ಬಡ್ಡಿ ಸಾಲವ ಅಡತಿ! 2!
ಗಳಿಸಿ ಗಳಿಸಿ ಮನ್ಯಾಗ ನೀ ಇಡತಿ! 2!
ನೀ ಸತ್ತ ಮೇಲೆ ಅದನ ಯಾರಿಗೆ ಕೊಡತಿ!!

ಮಾನವ ಜನ್ಮ ಶ್ರೇಷ್ಠ ಐತಿ!
ತಿಳಕೊಂಡು ನಡೆದರೆ ನಿನಗೊಲಿತೈತಿ! 2!
ದೇವುರ ತುಕಾರಾಮನ ಕವನ ಕೇಳಿ! 2!
ಮುಕ್ತಿ ಕಾಣಬೇಕು ನೀನು ಮನುಜ!



Comments

Popular posts from this blog

ಸೋರುತಿಹುದು ಮನೆಯ ಮಾಳಿಗಿ/soruthihudu maniya maligi

ತತ್ವ ವಿಚಾರವ ಮಾಡೋ/tatva vicharava madoo.