ಸೋರುತಿಹುದು ಮನೆಯ ಮಾಳಿಗಿ/soruthihudu maniya maligi
ಸೋರುತಿಹುದು ಮನೆಯ ಮಾಳಿಗಿ
ಸೋರುತಿಹುದು ಮನೆಯ ಮಾಳಿಗಿ,
ಅಜ್ಞಾನದಿಂದ(೨) ಸೋರುತಿಹುದು ಮನೆಯ ಮಾಳಿಗಿ.
ಸೋರುತಿಹುದು ಮನೆಯ ಮಾಳಿಗಿ, ದಾರುಗಟ್ಟಿಮಾಳ್ಪರಿಲ್ಲ (೨)
ಕಾಳಕತ್ತಲೆಯೊಳಗೆ ನಾನು ಮೇಲಕೇರಿ ಹೋಗಲಾರೆ, ಸೋರುತಿಹುದು ಮನೆಯ....
ಮುರುಕು ತೊಲೆಯು, ಹುಳುಕು ಜಂತಿ, ಕೊರೆದುಸರಿದು ಕೀಲ ಸಡಲಿ (೨)
ಹರುಕು ಚಪ್ಪರ ಜೀರುಗುಂಡೇ, ಮೇಲಕೇರಿ ಹೋಗಲಾರೆ, ಸೋರುತಿಹುದು ಮನೆಯ...
ಕರಕೆ ಹುಲ್ಲು ಕಸವು ಹತ್ತಿ, ದುರಿತ ಭವದಿ ಇರುವೆ ಮುತ್ತಿ (೨)
ಮಳೆಯ ಬರದಿ ತಿಳಿಯ ಮಣ್ಣು ಒಳಗು ಹೊರಗೂ ಏಕವಾಗಿ, ಸೋರುತಿಹುದು ಮನೆಯ...
ಕಾಂತೆ ಕೀಳೇ ತರುಣದಿಂದ ಬಂತುಕಾಣೆ ಹುಬ್ಬಿ ಮಳೆಯು (೨)
ಸಂತಶಿಶುವಿನಾಳ ಧೀಶಾ (೨) ನಿಂತುಪೊರೆವನು ಯಂದು ನಂಬಿದೆ, ಸೋರುತಿಹುದು ಮನೆಯ
Comments
Post a Comment